{"product_id":"ಒಂದು-ತಪ್ಪುಗ್ರಹಿಕೆಯ-ನಿವಾರಣೆ-a-misconception-removed-kannada","title":"ಒಂದು ತಪ್ಪುಗ್ರಹಿಕೆಯ ನಿವಾರಣೆ (A Misconception Removed, Kannada)","description":"\u003cp\u003eಹಜರತ್ ಮಿರ್ಜಾ ಗುಲಾಮ್ ಅಹ್ಮದ್ ಅಲೈಹಿಸ್ಸಲಾಮ್ವಾಗ್ದತ್ತ ಮಸೀಹ ಮತ್ತು ಮಹದಿಯಾಗಿ ಅಲ್ಲಾಹನಿಂದ ನಿಯೋಜಿಸಲ್ಪಟ್ಟ ಹಜರತ್ ಮಿರ್ಜಾ ಗುಲಾಮ್ ಅಹ್ಮದ್ ಅಲೈಹಿಸ್ಸಲಾಮ್ ಕ್ರಿಸ್ತಶಕ 1835ರಲ್ಲಿ ಭಾರತದ ಪಂಜಾಬಿನ ಒಂದು ಗ್ರಾಮವಾದ ಖಾದಿಯಾನಿನಲ್ಲಿ ಜನಿಸಿದರು. ಅವರು ಆರಂಭ ಕಾಲದಿಂದಲೇ ಅಲ್ಲಾಹನ ಆರಾಧನೆ, ಪ್ರಾರ್ಥನೆಗಳಲ್ಲೂ ಪವಿತ್ರ ಕುರ್‌ಆನ್ ಮತ್ತು ಇತರ ಧಾರ್ಮಿಕ ಗ್ರಂಥಗಳ ಅಧ್ಯಯನದಲ್ಲಿಯೂ ಮಗ್ನರಾಗಿದ್ದರು. ಆ ಕಾಲದಲ್ಲಿ ಇಸ್ಲಾಮ್ ಧರ್ಮವು ನಾಲ್ಕೂ ದಿಕ್ಕುಗಳಿಂದಲೂ ಆಕ್ರಮಣಗಳಿಗೆ ಗುರಿಯಾಗಿತ್ತು. ಇಸ್ಲಾಮ್ ಧರ್ಮದ ಶೋಚನೀಯ ಸ್ಥಿತಿಯನ್ನು ಕಂಡು ಅವರಿಗೆ ತೀವ್ರವಾಗಿ ದುಃಖವಾಗುತ್ತಿತ್ತು. ಇಸ್ಲಾಮ್ ಧರ್ಮದ ವಿರುದ್ಧದ ಅನ್ಯ ಧರ್ಮದವರ ಆಕ್ರಮಣಗಳನ್ನು ಪ್ರತಿರೋಧಿಸಲು ಮತ್ತು ಇಸ್ಲಾಮ್ ಧರ್ಮದ ನೈಜ ತತ್ವಗಳನ್ನು ಅವುಗಳ ವಾಸ್ತವಿಕ ರೂಪದಲ್ಲಿ ಲೋಕದ ಮುಂದೆ ಪ್ರಕಟಿಸಲು ಹಜರತ್ ಮಸೀಹ ಮೌಊದ್ ಅಲೈಹಿಸ್ಸಲಾಮ್ 90ಕ್ಕಿಂತ ಹೆಚ್ಚು ಗ್ರಂಥಗಳನ್ನು ಬರೆದರು. ಸಾವಿರಾರು ಪತ್ರಗಳನ್ನು ಬರೆದರು ಮತ್ತು ಅನೇಕ ಧಾರ್ಮಿಕ ಸಂವಾದಗಳಲ್ಲಿ ಅನ್ಯಧರ್ಮದವರನ್ನು ಎದುರಿಸಿದರು. ಸೃಷ್ಟಿಕರ್ತನಾದ ಅಲ್ಲಾಹನೊಂದಿಗೆ ಸಂಬಂಧವನ್ನು ಮನುಷ್ಯನಿಗೆ ದೊರಕಿಸಿಕೊಡಬಲ್ಲ ಜೀವಂತ ಧರ್ಮ ಇಸ್ಲಾಮ್ ಎಂದೂ ಆ ಧರ್ಮವನ್ನು ಅನುಸರಿಸುವ ಮೂಲಕ ಮನುಷ್ಯನಿಗೆ ನೈತಿಕ ಮತ್ತು ಆಧ್ಯಾತ್ಮಿಕ ಪರಿಪೂರ್ಣತೆ ಲಭಿಸುವುದು ಎಂದೂ ಅವರು ಪ್ರತಿಪಾದಿಸಿದರು.ಅವರಿಗೆ ಚಿಕ್ಕ ವಯಸ್ಸಿನಿಂದಲೇ ಸತ್ಯ ಸ್ವಪ್ನಗಳ, ದಿವ್ಯದರ್ಶನಗಳ ಮತ್ತು ದೈವಿಕ ಸಂಬೋಧನೆಗಳ ಭಾಗ್ಯ ಲಭಿಸಿತ್ತು. 1889ರಲ್ಲಿ ದೈವಿಕ ನಿರ್ದೇಶನದ ಪ್ರಕಾರ ಅವರು ಅಹ್ಮದೀಯಾ ಮುಸ್ಲಿಮ್ ಜಮಾಅತ್ ಎಂಬ ಪರಿಶುದ್ಧ ಜಮಾಅತ್ತನ್ನು ಸ್ಥಾಪಿಸಿ ಜನರಿಂದ ಬೈಅತ್ (ನಿಷ್ಠೆಯ ಪ್ರತಿಜ್ಞೆ) ಪಡೆಯಲು ಪ್ರಾರಂಭಿಸಿದರು. ದಿನ ಕಳೆದಂತೆ ಅವರಿಗೆ ದೈವಿಕ ಸಂಬೋಧನೆಗಳು ಸಹ ವರ್ಧಿಸುತ್ತಾ ಇದ್ದವು. ಲೋಕದ ವಿವಿಧ ಧರ್ಮಗಳಲ್ಲಿ ವಿವಿಧ ಹೆಸರುಗಳಲ್ಲಿ ಭವಿಷ್ಯ ನುಡಿಯಲಾದ ಅಂತಿಮ ಕಾಲಘಟ್ಟದ ಧರ್ಮಸುಧಾರಕ ನಾನೇ ಆಗಿರುವೆನು ಎಂದು ಅವರು ದೈವಾಜ್ಞೆ ಪ್ರಕಾರ ಘೋಷಿಸಿದರು. ಹಜರತ್ ಮುಹಮ್ಮದ್ ಸಲ್ಲಲ್ಲಾಹು ಅಲೈಹಿ ವಸಲ್ಲಮರು ಲೋಕದ ಅಂತಿಮ ಕಾಲಘಟ್ಟದಲ್ಲಿ ಆಗಮಿಸುವರೆಂದು ಶುಭವಾರ್ತೆ ನೀಡಿದ ವಾಗ್ದತ್ತ ಮಸೀಹ ಮತ್ತು ಮಹದಿ ಸಹ ತಾನೆಂದು ಅವರು ವಾದಿಸಿದರು. ಅಹ್ಮದೀಯಾ ಮುಸ್ಲಿಮ್ ಜಮಾಅತ್ ಈಗ ಲೋಕದ ಇನ್ನೂರಕ್ಕಿಂತ ಹೆಚ್ಚು ದೇಶಗಳಲ್ಲಿ ಸ್ಥಾಪಿಸಲ್ಪಟ್ಟಿದೆ.1908ರಲ್ಲಿ ಹಜರತ್ ಮಸೀಹ ಮೌಊದ್ ಅಲೈಹಿಸ್ಸಲಾಮ್ ನಿಧನ ಹೊಂದಿದಾಗ ಪವಿತ್ರ ಕುರ್‌ಆನಿನ ಆದೇಶಗಳ ಮತ್ತು ಹಜರತ್ ಮುಹಮ್ಮದ್ ಪೈಗಂಬರ್ ಸಲ್ಲಲ್ಲಾಹು ಅಲೈಹಿ ವಸಲ್ಲಮರ ಭವಿಷ್ಯವಾಣಿಗಳ ಪ್ರಕಾರ ಅವರ ಆಗಮನೋದ್ದೇಶವನ್ನು ಪರಿಪೂರ್ಣವಾಗಿ ಈಡೇರಿಸಲು ಖಿಲಾಫತ್ ವ್ಯವಸ್ಥೆ ಅಹ್ಮದೀಯಾ ಮುಸ್ಲಿಮ್ ಜಮಾಅತ್‌ನಲ್ಲಿ ಸ್ಥಾಪಿಸಲ್ಪಟ್ಟಿತು. ಈಗ ಹಜರತ್ ಮಿರ್ಜಾ ಮಸ್ರೂರ್ ಅಹ್ಮದ್ (ಐಯ್ಯದಹುಲ್ಲಾಹು ತಆಲಾ ಬಿನಸ್ರಿಹಿಲ್ ಅಜೀಜ್) ಜಾಗತಿಕ ಅಹ್ಮದೀಯಾ ಮುಸ್ಲಿಮ್ ಜಮಾಅತ್ತಿನ ಐದನೇ ಖಲೀಫರಾಗಿರುವರು.\u003c\/p\u003e\n\u003cp\u003e \u003c\/p\u003e\n\u003cp\u003eA Misconception Removed by Hazrat Mirza Ghulam Ahmad ( peace be upon him)\u003c\/p\u003e","brand":"AMI Bookstore","offers":[{"title":"Default Title","offer_id":54272227246355,"sku":"0888","price":3.0,"currency_code":"USD","in_stock":true}],"thumbnail_url":"\/\/cdn.shopify.com\/s\/files\/1\/0718\/1906\/7667\/files\/A_Misconception_Removed_Kannada.jpg?v=1781138503","url":"https:\/\/amibookstore.us\/products\/%e0%b2%92%e0%b2%82%e0%b2%a6%e0%b3%81-%e0%b2%a4%e0%b2%aa%e0%b3%8d%e0%b2%aa%e0%b3%81%e0%b2%97%e0%b3%8d%e0%b2%b0%e0%b2%b9%e0%b2%bf%e0%b2%95%e0%b3%86%e0%b2%af-%e0%b2%a8%e0%b2%bf%e0%b2%b5%e0%b2%be%e0%b2%b0%e0%b2%a3%e0%b3%86-a-misconception-removed-kannada","provider":"AMI Bookstore","version":"1.0","type":"link"}